𝐏𝐀𝐑𝐈𝐒 𝐁𝐑𝐄𝐒𝐓 𝐏𝐀𝐑𝐈𝐒 2023
ಅಂದು ಮಧ್ಯಾಹ್ನ ಸುಮಾರು 3 ಘಂಟೆಗೆ ನಾವೆಲ್ಲ ಪ್ಯಾರಿಸನ ರ್ಯಾಂಬೋಯಿಲಿಟ್ ನ ಪ್ರಾಂಗಣ ತಲುಪಿದೆವು ಅಲ್ಲಿ ಎತ್ತ ನೋಡಿದರತ್ತ ಹಚ್ಚ ಹಸಿರಿನಿಂದ ಕಂಗೊಳಿಸುತಿದ್ದ ಗಿಡಮರಗಳ ನೆರಳಿನ ಛಾಯೆಯಲ್ಲಿ ಬೇರೆ ಬೇರೆ ದೇಶಗಳಿಂದ ಕಿಕ್ಕಿರಿದು ಸೇರಿದ್ದ ಸರಿಸುಮಾರು 7-8 ಸಾವಿರ ಜನ ಸೈಕ್ಲಿಸ್ಟಗಳು, ಪಿಬಿಪಿಯ ಅತ್ಯುತ್ಸಾಹಿ ಸ್ವಯಂಸೇವಕರನ್ನ ಕಂಡು ಬೆರಗಾದ ಕ್ಷಣವದು. ಕಾರಣ ಅಲ್ಲಿ ಕಾರ್ಯನಿರ್ವಹಿಸುತಿದ್ದದ್ದು ಎಲ್ಲ 50-60ರ ಆಸುಪಾಸಿನ ಹದಿ ಹರೆಯದ ಯುವಕ ಯುವತಿಯರೆ. ಹೌದು ನಾನು ಇವರೆಗೆ ಹೆಚ್ಚೆಂದರೆ 2019ರಲ್ಲಿ ಹುಬ್ಬಳ್ಳಿ ಬೈಸಿಕಲ್ ಕ್ಲಬ್ಬಿನ ಲಾಂಗೆಸ್ಟ್ ಸಿಂಗಲ್ ಲೈನ್ ಗಿನ್ನೀಸ್ ವರ್ಲ್ಡ್ ರೆಕಾರ್ಡನಲ್ಲಿ ಸೇರಿದ್ದ 3000 ಜನ ಸೈಕ್ಲಿಷ್ಟಗಳನ್ನ ಕಂಡಿದ್ದೆ ಹೆಚ್ಚಾಗಿತ್ತು. ಅದೊಂದು ಅದ್ಭುತವಾದ ನೋಟಗಳನ್ನ ಹೊಂದಿದ ಸೈಕ್ಲಿಂಗನ Rambouillet Railway Station Entrance ಜಾತ್ರೆಯಾಗಿತ್ತು, ಟೆಂಡಮ್ ಬೈಕ್, ವೆಲೋಬೈಕ್, ಸ್ಪೆಷಲ ಬೈಕ್, ಪಿಕ್ಸಿ, ಹೈ ಬ್ರ್ಯಾಂಡಗಳ ತರೇವಾರಿ ಸೈಕಲ್ಗಳು ನೋಡುಗರ ಕಣ್ಮಣ ಸೆಳೆಯುತ್ತಿದ್ದವು. ಪ್ರತಿ 15 ನಿಮಿಷಕ್ಕೊಂದರಂತೆ 300 ಜನ ಸೈಕ್ಲಿಷ್ಟಗಳ ಬ್ಯಾಚೊಂದನ್ನ ಸ್ಟಾರ್ಟ್ ಪಾಯಿಂಟ್ಗಳಿಂದ ಬಿಡುತ್ತಿದ್ದರು, ಜೊತೆಗೆ ಬೇರೆ ಬೇರೆ ದೇಶಗಳಿಂದ ಬಂದಂತಹ ಎಲ್ಲ ಸೈಕ್ಲಿಷ್ಟಗಳನ್ನ ಅವರ ದೇಶದ ಹೆಸರು ಹೇಳುತ್ತಾ ಹುರಿದುಂಬಿಸುವ ಕಾರ್ಯದಲ್ಲಿ ಸಂಘಟಕರು ಅತ್ಯುತ್ಸಾಹಿಯಾಗಿದ್ದರು, ಅಂತಹದರಲ್ಲಿ ಇಂಡಿಯಾ, ಇಂಡಿಯಾ ಎಂದಾಗ...